ಶನಿವಾರ ಈದ್ ಮಿಲಾದ್ ದಿನದಂದು ಹುಬ್ಬಳ್ಳಿಯಲ್ಲಿ ಪಾಕಿಸ್ತಾನವನ್ನು ಗುಣಗಾನ ಮಾಡಿದ್ದ ಮೌಲ್ವಿ ಅಬ್ದುಲ್ ಹಬೀಬ್ ಇಮಾಮಸಾಬ್ ವಿರುದ್ಧ ಕ್ರಮಕೈಗೊಳ್ಳುವಂತೆ ಬಾಗಲಕೋಟೆ ಬಿಜೆಪಿ ನಗರ ಘಟಕ ಆಗ್ರಹಿಸಿದೆ. ಹುಬ್ಬಳ್ಳಿಯ ಗಣೇಶ್ ಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದ ಅಬ್ದುಲ್ ಹಬೀಬ್ ಇಮಾಮಸಾಬ್ ನನ್ನು ಕೂಡಲೆ ಬಂಧನ ಮಾಡುವಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ವೇಳೆ ರಾಜ್ಯ ಬಿಜೆಪಿ ಯುವಮೋಚಾ೯ ಪ್ರಧಾನ ಕಾಯ೯ದಶಿ೯ ಬಸವರಾಜ್ ಯಂಕಂಚಿ ಅವರು ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದರು."ಪಾಕಿಸ್ತಾನ ನೋಡಬೇಕೆಂದರೆ ಅಲ್ಲಿಗೇ ಹೋಗುವ ಅವಶ್ಯಕತೆ ಇಲ್ಲ. ಈ ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಕಾಣುತ್ತಿದೆ" ಎಂದು ಶನಿವಾರ ನಡೆದ ಈದ್ ಮಿಲಾದ್ ಆಚರಣೆ ವೇಳೆ ವಿವಾದಾತ್ಮಕ ಭಾಷಣ ಮಾಡಿದ್ದರು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೌಲ್ವಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿವೆ.